Tuesday, September 29, 2009

ಎದುರು ಮನೆ ಚೆಲುವೆ ಬಾರಮ್ಮ

ಎದುರು ಮನೆ ಚೆಲುವೆ ಬಾರಮ್ಮ, ನಮ್ಮಮ್ಮ ಮನೆಲಿಲ್ಲ..
ಹೆಪ್ಪಿಗೆ ಮೊಸರನು ಕೇಳಲು ಬಾರೆ
ಇಂದಿನ ಪೇಪರ್ ಓದಲು ಬಾರೆ
ಚಕ್ಕುಲಿ ಕೋಡ್ಬಳೆ ಮಾಡಿಟ್ಟಿದ್ದಾರೆ ಇಬ್ಬರು ಸೇರಿ ತಿನ್ನುವ ಬಾರೆ
ಶುಕ್ರವಾರದ ಸಂಜೆಯ ವೇಳೆಗೆ
ಚಿತ್ರಮಂಜರಿ ನೋಡಲು ಬಾರೆ...


ಎದುರು ಮನೆ ಚೆಲುವೆ ಬಾರಮ್ಮ, ನಮ್ಮಮ್ಮ ಮನೆಲಿಲ್ಲ...
ಕಾಲೇಜಿಗೋಗುವ ನೆನಪನು ಮಾಡಿ
ಕಾಮತ್ ಹೋಟೆಲ್ ಹತ್ತಿರ ಬಾರೆ
ಒನ್ ಬೈ ಟು ಕಾಫಿ ಕುಡಿದು
ಮಸಾಲೆ ದೋಸೆ ತಿನ್ನುವ ಬಾರೆ...


ಎದುರು ಮನೆ ಚೆಲುವೆ ಬಾರಮ್ಮ, ನಮ್ಮಮ್ಮ ಮನೆಲಿಲ್ಲ...
ಇಂದಿನ ಜನುಮಕು ಮುಂದಿನ ಜನುಮಕು
ಎಲ್ಲಾ ಜನುಮಕು ನೀನೆ ಬಾರೆ
ಅಪ್ಪ ಅಮ್ಮ ಒಪ್ಪದಿದ್ದರೆ
Suitcase ತೊಗೊಂಡು ಬಸ್ standಗೆ ಬಾರೆ...

ಎದುರು ಮನೆ ಚೆಲುವೆ ಬಾರಮ್ಮ, ನಮ್ಮಮ್ಮ ಮನೆಲಿಲ್ಲ...

(ಇದು ಕೇವಲ ಎದುರುಮನೆಯಲ್ಲಿ ಚೆಲುವೆ ಇರುವವರಿಗೆ ಮಾತ್ರ ------ ಕದ್ದಿದ್ದು...)

ಏನು ಕಾಲ ಬಂತಪ್ಪ..ನಾಚಿಕೆಗೇಡು..!!!!???

ಪಾಕ್ ಗೆಲುವಿಗೆ ಭಾರತೀಯರು ಪ್ರಾರ್ಥಿಸಬೇಕು:ಧೋನಿ

ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, '' ಭಾರತದ ಅಭಿಮಾನಿಗಳು ನಾವು ಸೆಮಿಫೈನಲ್ ಪ್ರವೇಶ ಪಡೆಯುವುದನ್ನು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕಾಗಿ ಅವರು ಖಂಡಿತವಾಗಿಯೂ ಪಾಕಿಸ್ತಾನ ಗೆಲುವಿಗಾಗಿ ಪ್ರಾರ್ಥಿಸಲಿದ್ದಾರೆ" ಎಂದು ಹೇಳಿದ್ದಾರೆ.

ನಿಮಗೆ ಗೆಲ್ಲೋ ಶಕ್ತಿ ಇಲ್ಲಾ ಅಂತಾ ಒಪ್ಕೊಳಿ ಅದ್ನಾ ಬಿಟ್ಟು ...

ಬೇಕಿತ್ತಾ ಇದು ನಮಗೆ??! ನಾನಂತು ಪ್ರಾರ್ಥನೆ ಮಾಡಲ್ಲ ಪಾಕಿಸ್ತಾನ ಗೆಲ್ಲಲಿ ಅಂತಾ.. ಸೋತು ಬಂದರು ಪರ್ವಾಗಿಲ್ಲ.


ನೀವು???

Thursday, March 29, 2007

ಗೆಳೆಯನ ಮದುವೆ ಮತ್ತು ಅವನ ಫಸ್ಟ್ ನೈಟ್.....!!!!!

ಮದುವೆ ಅಂದರೆ ಎಲ್ಲಾರಿಗೂ ಸಂತೋಷ, ಸಡಗರ.. ಗೆಳೆಯನು ಬಹಳ ಖುಷಿ ಲಿ ಇದ್ದ ಸಂಜೆಯಾಗುವವರೆಗೆ...!?
ಆದರೆ ಅವನಿಗೆ ಗೊತ್ತಿಲ್ಲದ ವಿಷಯ ಎಂದರೆ ನಾವೆಲ್ಲರೂ ( So Called Friends..!!?? ) ಅವನ ಪಸ್ಟ್ ನೈಟ್ ಹಾಳು ಮಾಡುವದಕ್ಕೆ ರೆಡಿ ಆಗಿ ಕುಳಿತಿದ್ದೇವೆಂದು....!!!!!
ಪಸ್ಟ್ ನೈಟ್ ಬಗ್ಗೆ ಯೋಚನೆ ಮಾಡುತ್ತಾ ಖುಷಿಲಿ ಇದ್ದ ಅವನಿಗೆ, ರಾತ್ರಿ ನಮ್ಮೆಲ್ಲರನ್ನೂ ಒಟ್ಟಿಗೆ ನೋಡಿದ ಮೇಲೆ ಸ್ವಲ್ಪ ಸಂಶಯ ಬಂತು ನಮ್ಮ ಮೇಲೆ,
ಏನೋ "ಕಿತಾಪತಿ" ಕೆಲಸ ಮಾಡುತ್ತಾ ಇದ್ದಾರೆ ಇವರು ಎಂದು. ಆವಾಗಾಗಲೆ ನಾವು ಪುಲ್ ಪ್ಲಾನ್ ರೆಡಿ ಮಾಡಿ, ಅದನ್ನ ಕಾರ್ಯ ರೂಪಕ್ಕೆ ತರಲು ರೆಡಿ ಆಗಿದ್ದೆವು. ಅವನ ರೂಮ್ ತುಂಬಾ "ಸಿಂಗಲ್", "ಡಬಲ್", " ತ್ರಿಬಲ್" ಮೀನಿಂಗ್ ಇರುವಂಥ ಬರಹಗಳ ಪೊಸ್ಟರ್ ಗಳನ್ನ ಅಂಟಿಸಿದೆವು.
ಎಲ್ಲಾ ಕಡೆ ಒಂದೊಂದು ರೀತಿಯ ಬರಹಗಳು... ಬರೆದವನು ಮಹೇಂದ್ರ ಸಾಲೆಕೊಪ್ಪ , ಗೋಡೆಗೆ ಅಂಟಿಸಿದವ ರಾಜ್ ಇಟಗುಳಿ.ಗೋಡೆ ಎಲ್ಲಾ ಬರೆದು ತುಂಬಿದ ಮೇಲೆ, ರೂಮ್ ನ ನೆಲ, ಬೆಡ್ ಎಲ್ಲಾ ಪುಲ್ ಪೋಸ್ಟರ್, ಪೋಸ್ಟರ್.ರೂಮಲ್ಲಿ ಮೇಲೆ FAN ಗೆ ಅನಿರುದ್ದ ಒಂದು ಮೊಬೈಲ್ ಕಟ್ಟಿದ, ಕೈ ಗೆ ಸಿಗದ ಹಾಗೆ. ಆಮೇಲೆ ಅದೇ ಅವನಿಗೆ ಬೆಳಗಿನವರೆಗೆ ತೊಂದರೆ ಮಾಡಿದ್ದು. ಆ ಮೊಬೈಲ್ ನ ರಿಂಗ್ ಟೋನ್ ಕೇಳಿದ್ರೆ ಯಾರು ಆ ಕಡೆ ತಲೆನು ಹಾಕಲ್ಲ ಆ ರೀತಿ ಇತ್ತು...!!! ೨ಡು ಹೆಡ್ ಲೈಟ್ ನ ಹಾಗಿದ್ದ ಬಲ್ಬ್ ಗಳು, ೨ಡು ದೊಡ್ಡ ಸ್ಪೀಕರ್ ಇಸ್ಟು ರೆಡಿ ಆಗಿದ್ದವು ರೂಮ್ ಬೆಳಗಲು, ಅದರ ಜೊತೆ ೧೦ ಅಲಾರಾಂಗಳು ಅವನ ಫಸ್ಟ್ ನೈಟ್ ಹಾಳು ಮಾಡಲು ರೆಡಿ ಯಾಗಿ ಕುಳಿತಿದ್ದವು.. !ನಾವು ರೆಡಿಯಾಗಿ ಅವನ ರೂಮ್ ಬಾಗಿಲಿನಲ್ಲಿ ಕಾರ್ಡ್ಸ್ ಆಡುತ್ತಾ ಕುಳಿತಿದ್ದೆವು ಆಗ ಸಮಯ ರಾತ್ರಿಯ ೧೧ ಗಂಟೆ...
ಅನಿರುದ್ಧ ಮತ್ತು ನಾನು ಸೇರಿ ರೂಮ್ ನ ಲಾಕನ್ನು ಕಳಚಿ ಆಗಿತ್ತು. ಅವನು ರೂಮ್ ನ ಒಳಗೆ ಹೋಗುವದು ಅಸಾಧ್ಯವಾಗಿತ್ತು. ಅಂತು ೧೨ ಗಂಟೆ ಗೆ ಕುರಿ ಮೇಲೆ ಬಂತು, ನಾವು ಇದನ್ನೇ ಕಾಯುತ್ತಾ ಇದ್ದೆವು, ಬಂದವನೆ ನಮ್ಮನ್ನ ನೋಡಿ ಮತ್ತೆ ವಾಪಸ್ ನಡೆದ. ಮತ್ತೆ ೧೦ನಿಮಿಷ ದ ನಂತರ ಬಂದ, ಬಂದ ಕೂಡಲೆ ಪವನ್ ಹೆಗಡೆ 10 ಸಾವಿರ ರೂಪಾಯಿ ಕೊಡು ಆಮೇಲೆ ಬಿಡ್ತೀವಿ ರೂಮ್ ಒಳಗೆ ಅಂತಾ ಹೇಳಿದ.ಇದನ್ನು ಕೇಳಿದ ಗೆಳೆಯನು "ವಿಶ್ವಾಮಿತ್ರ" ಮೈ ಮೇಲೆ ಬಂದ ಎನ್ನಿಸುವ ಹಾಗೆ " ಕೊಡ್ತ್ನಿಲ್ಲೆ ದುಡ್ಡಾ ಎಂತಾ ಮಾಡ್ಕ್ಯತ್ರ ಮಾಡ್ಕ್ಯಳಿ " ಹೇಳಿ ಕೋಪದಿಂದ ವಾಪಸ್ ನಡೆದ, ನಮಗೆ ಇನ್ನು ದುಡ್ದು ಬರಲ್ಲ ಅಂತ ಅನ್ನಿಸಿತು. ಆದರೆ ಇದು ಬಹುಬೇಗ ಸುಳ್ಳಾಯಿತು, ಗೆಳೆಯ ಮತ್ತೆ ೫ನಿಮಿಷದ ನಂತರ ಮತ್ತೆ ವಾಪಸ್ ಬಂದ, ಬಂದವನೆ ಸ್ವಲ್ಪ ತಣ್ಣಗಿನ ಧ್ವನಿಯಲ್ಲಿ " ೨ಸಾವಿರ ಕೊಡುತ್ತೇನೆ ಒಳಗೆ ಬಿಡಿ" ಎಂದ. ಅಲ್ಲೇ ನಿಂತಿದ್ದ ಪ್ರಸನ್ನ ಜೋಷಿ ಆಗಲ್ಲ 8 ಸಾವಿರ ಕೊಡು ಎಂದ. ಕೊನೆಗೆ ಸ್ಟಾರ್ಟ್ ಆಗಿದ್ದು "ಚೌಕಾಶಿ" ವ್ಯವಹಾರ... ರಾಜಿ ಆಗಿದ್ದು 5 ಸಾವಿರ ರೂಪಾಯಿಗೆ. ಆಗ ಸಮಯ ರಾತ್ರಿಯ 2 ಗಂಟೆ. ನಾವು ಮನೆಗೆ ಹೊರಟೆವು, ಅದನ್ನ ನೋಡಿ ಗೆಳೆಯನು ಖುಷಿಯಿಂದ ರೂಮ್ ನ ಒಳಗೆ ಹೋದ.. ಆದರೆ ಮೋಬೈಲ್ ಅವನನ್ನ ಕಾಯುತ್ತಾ FAN ಗೆ ನೇತಾಡುತ್ತಾ ಇತ್ತು..!!!! ನಂತರ ಕೆಲ್ಸ ಮುಂದುವರೆಸಿದ್ದು ದ ಗ್ರೇಟ್ ಪನ್ನ ಎಡೆಬಿಡದೆ ರಿಂಗ್ ಮಾಡಿ... ತನ್ನ ಮೋಬೈಲ್ ಲಿ ಅಟೊ ರಿಡೈಲ್ ಹಾಕಿ ತೊಂದರೆ ಕೊಟ್ಟವನು..!! ಮತ್ತೆ ಅವನ ಜೊತೆ ಅಮಿತ್ ಬಾಳಗಾರ್ ರೂಮಲ್ಲಿ ಲೈಟ್ ಬಿಟ್ಟಿದ್ದು, ಸ್ಪೀಕರ್ ON ಮಾಡಿದ್ದು ವಿನಾಯಕ ಬಾವ.ಆ ಮೊಬೈಲ್ ರಿಂಗ್ ಕೇಳಿ ಅಲ್ಲೇ ಹೊರಗೆ ಮಲಗಿದ್ದ ಹೆಂಗಸರು ಹೇಳಿದ್ಡು " ಇಸ್ಟು ಬೇಗ ಶುರುಮಾಡಿದ್ನ ತಮ್ಮ..." ಹೇಳಿ..!!!!! (ವಿ.ಸೂ.-- ಆ ರಿಂಗ್ ಟೋನ್ ಬೇಕಿದ್ರೆ ನನಗೆ ತಿಳಿಸಿ)
ಬೆಳಿಗ್ಗೆ ಎದ್ದು ರೂಮ್ ನಿಂದ ಹೊರಗೆ ಬಂದ ಗೆಳೆಯ ಹೇಳಿದ ಮೊದಲ ಮಾತು " ೧೦೦-೨೦೦-೪೦೦ ಕಾಟಿ ಸಾಯ್ಲಿ ರಾಯಾ ??!!!"
ಅಂತೂ ಹೀಗೆ ಗೆಳೆಯನ ಫಸ್ಟ್ ನೈಟ್ ಆತು. ಆದರೆ ಅವನು ರೂಮ್ ನ ಒಳಗೆ ಹೋಗುತ್ತಾ ಅವನು ಮತ್ತೆ ಎಲ್ಲಾ ಪ್ರೆಂಡ್ಸ್ ಹೇಳಿದ ಮಾತು ಕಿವಿ ಯಲ್ಲಿ ಇನ್ನು ಗುಂಯ್ ಗುಂಯ್ ಹೇಳ್ತಾ ಇದ್ದು...!!!! " ನೆಕ್ಸ್ಟ್ ನೀನೇಯಾ ಮಗನೆ, ರಾಶಿ ನೆಗಿಯಾಡಡಾ " ಎಲ್ಲಾ ಪ್ರೆಂಡ್ಸ್ ಎನ್ನ ಕಡೆ ತಿರುಗಿ " ಹೌದು ನೆನಪಿಟ್ಗ ಮಗನೆ " ಹೇಳಿದ್ದು..!!! " ದೇವರೆ ಕಾಪಾಡಪ್ಪ ಇವರಿಂದ ಎನ್ನ " ಹೇಳಿ ಸುಮ್ಮನೆ ಒಂದು ಮೂಲೆಲಿ ಹೋಗಿ ನಿಂತುಕೊಂಡೆ ಆಮೇಲೆ..!!!

ಇನ್ನು ಎಂತಾ ಕಾದಿದ್ದನ ದೇವರಿಗೆ ಗೊತ್ತು, ಈಗ್ಲೇ ಹೆದರಿಕೆ ಸ್ಟಾರ್ಟ್ ಆಜು, ಯಾರಾದ್ರೂ ಕಾಪಾಡ್ರೋ ಇವರಿಂದ ಎನ್ನಾ"

ಕ್ರಿಕೆಟ್ ಮತ್ತು ಟೀಮ್ ನ ಹೆಸರುಗಳು........

ನನ್ನ ಮೆಚ್ಚಿನ ಆಟವಾದ ಕ್ರಿಕೆಟ್ ನಿಂದ ಬರೆಯಲು ಪ್ರಾರಂಭಿಸುತ್ತೇನೆ.........

ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದ್ದು ಚಿಕ್ಕೋನು ಇದ್ದಾಗ ( ನನಗೆ ಸರಿಯಾಗಿ ನೆನಪಿಲ್ಲ )
ಟೂರ್ನಮೆಂಟ್ ಆಡಲು ಪ್ರಾರಂಭಿಸಿದ್ದು ಹೈಸ್ಕೂಲ್ ನಲ್ಲಿ ಇದ್ದಾಗಿಂದ... ಹಾಗೆ ಫುಲ್ ಟೈಂ ಸ್ಟಾರ್ಟ್ ಮಾಡಿದ್ದು College ಮೆಟ್ಟಿಲು ಹತ್ತಿದಾಗಿಂದ..!!!!!!!

ಆವಾಗ Class ಲ್ಲಿ ಕಡಿಮೆ, Ground ಲ್ಲಿ ಫುಲ್ ಟೈಂ ಇರುತ್ತಿದ್ದೆ..!!!
ನಮ್ಮ ಟೀಮ್ ಹೆಸರು " ಪ್ಲೇ ಬಾಯ್ಸ್ " ( PLAY BOYS ), ಇವರಿಗೆ " ಲೇಟ್ ಬಾಯ್ಸ್ " ಅಂತಾನು ಕರಿತಾರೆ. ಯಾವಾಗಲು ಮ್ಯಾಚ್ ಗೆ ಲೇಟ್ ಆಗಿಯೇ ಬರೋದು ಇವರು.. ಅದಿಕ್ಕಾಗಿಯೇ ಈ ಹೆಸರು ಇವರಿಗೆ.

ಯಾವ ಪುಣ್ಯಾತ್ಮನಿಗೆ ನೆನಪಾಯಿತೋ ಇ ಹೆಸರು... ನಾವು ಇರೋದಕ್ಕು ಈ ಹೆಸರಿಗೂ ಯಾವುದೇ ಸಂಬಂಧ ಇಲ್ಲ. ಇದರಲ್ಲಿ ಇರೋರೆಲ್ಲ " ಗುಡ್ ಬಾಯ್ಸ್ " ಮಾತ್ರ....!!
ನಾನು ಬರೆಯಲು ಹೊರಟಿರೊದು ಇದನ್ನೆ..!!! ಟೀಂ , ಅವರ ಚಿತ್ರ,ವಿಚಿತ್ರ ಹೆಸರುಗಳು ಮತ್ತೆ ಅವರ ನಡುವಳಿಕೆಗಳ ಬಗ್ಗೆ.
ಒಂದು ಟೀಮ್ ನ ಹೆಸರು "ರಣಧೀರ" ಎಂದು....!!!! ಇದೇನು ಕ್ರಿಕೆಟ್ ಟೀಮ್ ಹೆಸರೊ ಅಥವಾ ಸಿನೀಮಾ ದ ಹೆಸರೊ ಎಂದು ಗೊಂದಲಕ್ಕೆ ಒಳಗಾಗಬೇಡಿ.
ಅವರ ವೇಷ, ಭೂಷಣಗಳು ಸ್ವಲ್ಪ ಹಾಗೆ ಇದ್ದವು.. ಅವರನ್ನ ನೋಡಿಯೆ ನಮಗೆ ಕಾಲಲ್ಲಿ ಎಲ್ಲಾ ನಡುಕ, ಅವರು ಒಬ್ಬೊಬ್ಬರು ನಮ್ಮ ೩-೪ ಜನಕ್ಕೆ ಸಮವಾಗಿ ಇದ್ದರು.. ನಮಗೆ ಹೌದಪ್ಪಾ ಇವರು ನಿಜವಾದ "ರಣಧೀರ"ರೆ ಅನ್ನಿಸಿತ್ತು..
ಆದರೆ ನಮ್ಮ ನಂಬಿಕೆ ಸುಳ್ಳಾಗಿದ್ದು, ಮೊದಲ ಬಾಲ್ ಅನಿರುದ್ದ ಮಾಡಿದಾಗಲೆ..!!!
ಆ ಬ್ಯಾಟ್ಸಮನ್, ಅನಿರುದ್ದ ಮಾಡಿದ ಬಾಲ್ ನ ವೇಗ ನೋಡಿ, ಸ್ಟಂಪ್ ನಿಂದ ಒಂದು ಮೀಟರ್ ದೂರ ಓಡಿ ಹೋದಾಗಲೆ...!!!
ಆಮೇಲೆ ಬಂದ ಎಲ್ಲಾ ಬ್ಯಾಟ್ಸಮನ್ ಗಳು ಹಾಗೇ "ಪಿಚ್" ತುಂಬಾ ಓಡುತ್ತಿದ್ದರು ಬಾಲ್ ಗೆ ಹೆದರಿ,
ಆಮೇಲೆ ಗೊತ್ತಾಯಿತು ಇವರು "ರಣಧೀರ" ರಲ್ಲಾ, "ಹೆದರುಪುಕ್ಕಲರು" ಎಂದು.
ಇನ್ನು ಚಿತ್ರ, ವಿಚಿತ್ರ ಹೆಸರುಗಳು. ಅದು "ಸೀಸನ್" ಅವಲಂಬಿಸಿರುತ್ತೆ ಅಂತಾ ನನ್ನ ನಂಬಿಕೆ ಯಾಕೆಂದರೆ
ಸುನಾಮಿ ಬಂದರೆ ಟೀಮ್ ಹೆಸರು " ಸುನಾಮಿ ", ವೀರಪ್ಪನ್ ಸುದ್ದಿಯಲ್ಲಿ ಇದ್ದಾಗ ಹೆಸರು " ವೀರಪ್ಪನ್ ".
ಮತ್ತೊಂದು ಟೀಮ್ ನ ಹೆಸರು " ಜೈ ಅಲಕ್ ನಿರಂಜನ್ ", ಇವರೇನು ಕ್ರಿಕೆಟ್ ಆಡುತ್ತಾರೊ ಅಥವಾ ಮಠಕ್ಕೆ ಹೋಗಿ ಪೂಜೆ ಮಾಡುತ್ತಾರೋ ಅನ್ನಿಸಿದರೆ, ಅದರಲ್ಲಿ ನಮ್ಮ ತಪ್ಪಿಲ್ಲ ಬಿಡಿ..............